ಮುತ್ತೈದೆಯರು ಮನೆಯಲ್ಲಿ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ, ಮಾಡುತಿದ್ದರೆ ಇವತ್ತೇ ಸರಿಪಡಿಸಿಕೊಳ್ಳಿ.

17

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಮುತ್ತೈದೆಯರು ಮನೆಯಲ್ಲಿ ಅಪ್ಪಿತಪ್ಪಿಯೂ ಈ ತಪ್ಪುಗಳನ್ನು ಮಾಡಬೇಡಿ. ಒಂದು ವೇಳೆ ಈ ತಪ್ಪುಗಳನ್ನು ನೀವು ಮಾಡುತಿದ್ದರೆ ಇವತ್ತೇ ಸರಿಪಡಿಸಿಕೊಳ್ಳಿ. ಆಚಾರ-ವಿಚಾರ ಅನ್ನುವುದು ಪ್ರತಿಯೊಬ್ಬರ ಸಂಸಾರದಲ್ಲಿಯೂ, ಪ್ರತಿಯೊಬ್ಬರ ಮನೆಯಲ್ಲಿಯೂ ಇದ್ದೇ ಇರುತ್ತದೆ. ಸ್ತ್ರೀ ಸ್ವರೂಪ ಎಂದರೆ ದೇವಿಯ ಸ್ವರೂಪ. ಸಾಕ್ಷಾತ್ ಮಹಾಲಕ್ಷ್ಮಿ ದೇವಿಯ ಹಾಗೆ ಅಲಂಕಾರ ಮಾಡಿಕೊಂಡು ನಗುನಗುತ್ತಾ ಮನೆಯಲ್ಲಿ ಓಡಾಡುತ್ತಿದ್ದರೆ ಮನೆಯಲ್ಲಿ ಮಹಾಲಕ್ಷ್ಮಿ ದೇವಿಯ ಪ್ರವೇಶವಾಗುತ್ತದೆ. ಆಚಾರ-ವಿಚಾರಗಳು ಗೊತ್ತಿದ್ದೋ ಗೊತ್ತಿಲ್ಲದೆಯೋ ಕೆಲವು ತಪ್ಪುಗಳು ನಡೆಯುತ್ತಿರುತ್ತವೆ. ಈ ತಪ್ಪುಗಳನ್ನು ಮಾಡುವುದರಿಂದ ಮನೆಯಲ್ಲಿ ಲಕ್ಷ್ಮೀದೇವಿಯು ನೆಲೆಸುವುದಿಲ್ಲ. ಇಂತಹ ತಪ್ಪುಗಳನ್ನು ಇವತ್ತಿನಿಂದ ಸರಿ ಮಾಡಿಕೊಂಡು ನೋಡಿ ನಿಮ್ಮ ಕುಟುಂಬದಲ್ಲಿ ಸುಖ, ಶಾಂತಿ, ನೆಮ್ಮದಿ ನೆಲೆಸುತ್ತದೆ. ಈ ತಪ್ಪುಗಳು ಯಾವುದು ಎಂಬುದನ್ನು ಇವತ್ತೇ ತಿಳಿದುಕೊಳ್ಳಿ:

ಮೊದಲನೆಯದಾಗಿ, ಸಂಜೆಯ ಹೊತ್ತು ಯಾವುದೇ ಕಾರಣಕ್ಕೂ ಬಟ್ಟೆಗಳನ್ನು ಒಗೆಯಬೇಡಿ. ಏಕೆಂದರೆ ಈ ಸಮಯದಲ್ಲಿ ಮಹಾಲಕ್ಷ್ಮಿದೇವಿಯು ಮನೆಯನ್ನು ಪ್ರವೇಶಿಸುತ್ತಾಳೆ. ಎರಡನೆಯದು ಸಂಜೆಯ ಹೊತ್ತಿನಲ್ಲಿ ಉಗುರುಗಳನ್ನು ಕಚ್ಚಬಾರದು. ಸಂಜೆಯ ಹೊತ್ತು ಈ ರೀತಿ ಮಾಡುವುದರಿಂದ ಮನೆಯಲ್ಲಿ ಆರೋಗ್ಯದ ಸಮಸ್ಯೆ, ಹಣಕಾಸಿನ ಸಮಸ್ಯೆ ಉಂಟಾಗುತ್ತದೆ. ಹೆಣ್ಣು ಮಕ್ಕಳು ಉಗುರುಗಳನ್ನು ಹೆಚ್ಚು ಉದ್ದವಾಗಿ ಬೆಳೆಸಬಾರದು. ಏಕೆಂದರೆ ಉಗುರು ಉದ್ದವಾಗಿ ಬೆಳೆದರೆ ಕೋಪವು ಹೆಚ್ಚಾಗುತ್ತದೆ. ಇನ್ನು ಹೆಚ್ಚು ಸಮಯ ನಿದ್ರಿಸುವ ಹೆಣ್ಣುಮಕ್ಕಳು ಮನೆಯಲ್ಲಿದ್ದರೆ ಮಹಾಲಕ್ಷ್ಮಿ ದೇವಿಯ ಮನೆಯಲ್ಲಿ ನೆಲೆಸುವುದಿಲ್ಲ. ಮನೆಯಲ್ಲಿ ಒಂದಲ್ಲ ಒಂದು ಸಮಸ್ಯೆಗಳು ಎದುರಾಗುತ್ತವೆ ಹಾಗೂ ಯಾವುದೇ ಕೆಲಸಕ್ಕೆ ಕೈ ಹಾಕಿದರು ಕೂಡ ಯಶಸ್ಸು ಕಾಣುವುದಿಲ್ಲ.

ಕೆಲವು ಹೆಣ್ಣುಮಕ್ಕಳು ಮಧ್ಯಾಹ್ನ ನಿದ್ದೆ ಮಾಡುವುದು ಅಥವಾ ಬೆಳಗ್ಗೆ ಲೇಟಾಗಿ ಹೇಳುವುದು ಮಾಡಬಾರದು. ಇನ್ನು ಮಂಗಳವಾರ ಅಥವಾ ಶುಕ್ರವಾರದ ದಿನದಂದು ಮನೆಯಲ್ಲಿ ಹೆಣ್ಣುಮಕ್ಕಳು ಕಣ್ಣೀರನ್ನು ಹಾಕಬಾರದು. ಹೆಣ್ಣು ಮಕ್ಕಳು ಕಣ್ಣೀರು ಹಾಕುವುದರಿಂದ ಮನೆಗೆ ಶ್ರೇಯಸ್ಸು ಇರುವುದಿಲ್ಲ. ಮನೆ ಏಳಿಗೆಯಾಗಬೇಕು ಎಂದರೆ ಹೆಣ್ಣುಮಕ್ಕಳು ಸದಾ ಲವಲವಿಕೆಯಿಂದ ಮನೆಯಲ್ಲಿ ಇರಬೇಕು. ಇನ್ನು ಪ್ಲಾಸ್ಟಿಕ್ ಹೂಗಳನ್ನು ದೇವರಿಗೆ ಮೂಡಿಸಬಾರದು ಹಾಗೂ ದೇವರ ಕೋಣೆಯ ಬಾಗಿಲಿಗೆ ಹಾಕಬಾರದು. ಇನ್ನು ಪ್ರತಿದಿನವೂ ಹೊಸ್ತಿಲನ್ನು ಸಾರಿಸಿ ಅರಿಶಿನ-ಕುಂಕುಮವನ್ನು ಇಟ್ಟು, ಮನೆಯ ಮುಂದೆ ರಂಗೋಲಿಯು ಹಾಕುವುದರಿಂದ ಮನೆಗೆ ಲಕ್ಷ್ಮೀದೇವಿಯ ಪ್ರವೇಶವಾಗುತ್ತದೆ.

ಒಂದು ವೇಳೆ ನೀವು ರಂಗೋಲಿಯನ್ನು ಹಾಕದೆ ಬೇರೆ ಕೆಲಸಗಳನ್ನು ಮೊದಲು ಮಾಡಿದರೆ, ನಿಮ್ಮ ಮನೆಗೆ ಲಕ್ಷ್ಮೀದೇವಿಯು ಬರುವುದಿಲ್ಲ. ಇನ್ನು ಪ್ರತಿಯೊಬ್ಬ ಹೆಣ್ಣು ಮಗಳು ತುಳಸಿ ಗಿಡವನ್ನು ಪೂಜಿಸಬೇಕು. ತುಳಸಿ ಗಿಡವು ಮನೆಯ ಏಳಿಗೆಯನ್ನು ಸೂಚಿಸುತ್ತದೆ. ತುಳಸಿಗಿಡ ಬೆಳೆದ ಹಾಗೆ ಮನೆಯಲ್ಲಿ ಹಣಕಾಸು, ನೆಮ್ಮದಿ ವೃದ್ಧಿಯಾಗುತ್ತದೆ. ಅದೇ ತುಳಸಿಗಿಡ ಒಣಗುತ್ತಿದ್ದರೆ, ಅದು ಮನೆಗೆ ಸಮಸ್ಯೆಯಾಗುತ್ತದೆ ಎಂಬುದನ್ನು ಸೂಚಿಸುತ್ತದೆ. ಇನ್ನೂ ಕೊನೆಯದಾಗಿ ಕೂದಲನ್ನು ಒದ್ದೆಯಾಗಿ ಇಟ್ಟುಕೊಂಡು ಅಥವಾ ಕೂದಲನ್ನು ಬಿಟ್ಟುಕೊಂಡು ಪೂಜೆಯನ್ನು ಮಾಡಬಾರದು. ಕೂದಲನ್ನು ಒಣಗಿಸಿದ ನಂತರವೇ ಪೂಜೆ ಮಾಡಬೇಕು.

Get real time updates directly on you device, subscribe now.