ಕೆಜಿಎಫ್ ಟೀಸರ್ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ ಬಾಹುಬಲಿ ನಿರ್ದೇಶಕ ರಾಜಮೌಳಿ ಹೇಳಿದ್ದೇನು ಗೊತ್ತಾ??

15

Get real time updates directly on you device, subscribe now.

ಇದೀಗ ನಿಮಗೆಲ್ಲರಿಗೂ ತಿಳಿದಿರುವಂತೆ ಜನವರಿ 7 ನೇ ತಾರೀಖಿನಂದು ಬಿಡುಗಡೆಯಾದ ಕೆಜಿಎಫ್ ಚಿತ್ರದ ಟೀಸರ್ ವಿಶ್ವದ ಯಾವುದೇ ಚಿತ್ರಗಳು ಮಾಡಿರದ ದಾಖಲೆಗಳನ್ನು ಮಾಡಿ ವಿಶ್ವದಲ್ಲಿಯೇ ಅತಿ ಹೆಚ್ಚು ವೇಗವಾಗಿ ಕೋಟ್ಯಂತರ ವೀಕ್ಷಣೆಗಳನ್ನು ಪಡೆದುಕೊಂಡ ಚಿತ್ರ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಹಾಲಿವುಡ್ ಚಿತ್ರರಂಗದ ಸಾವಿರಾರು ಕೋಟಿ ಬಜೆಟ್ ಹಾಕಿ ನಿರ್ಮಾಣ ಮಾಡುವ ಚಿತ್ರಗಳು ಮಾಡಿರುವ ದಾಖಲೆಗಳನ್ನು ಕೆಜಿಎಫ್ ಚಿತ್ರ ಬ್ರೇಕ್ ಮಾಡಿದೆ.

ಇನ್ನು ಹಾಲಿವುಡ್ ಚಿತ್ರರಂಗದ ರೀತಿಯಲ್ಲಿ ಭಾರತದಲ್ಲಿ ಚಿತ್ರಗಳನ್ನು ನಿರ್ಮಾಣ ಮಾಡುವ ಹೆಗ್ಗಳಿಕೆಗೆ ಪಾತ್ರವಾಗಿರುವ ಬಾಹುಬಲಿ ನಿರ್ದೇಶಕ ರಾಜಮೌಳಿ ರವರು ಇದೀಗ ಯಶ್ ಹಾಗೂ ಕೆಜಿಎಫ್ ಚಿತ್ರತಂಡದ ಕುರಿತು ಮಾತನಾಡಿದ್ದು, ಬಾಹುಬಲಿ ಚಿತ್ರದ ಎಲ್ಲಾ ದಾಖಲೆಗಳನ್ನು ಅಳಿಸಿ ಹಾಕಿರುವ ಕೆಜಿಎಫ್ 2 ಚಿತ್ರದ ಬಗ್ಗೆ ತಮ್ಮದೇ ಆದ ರೀತಿಯಲ್ಲಿ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಹೌದು ಇದೀಗ ಮಾತನಾಡಿರುವ ಬಾಹುಬಲಿ ನಿರ್ದೇಶಕ ರಾಜಮೌಳಿ ರವರು ನಾನು ಕೆಜಿಎಫ್ ಚಾಪ್ಟರ್ ಟು ಟೀಸರ್ ನೋಡಿ ಎಲ್ಲರೂ ತಮ್ಮ ಅಭಿಪ್ರಾಯಗಳನ್ನು ಮೊದಲು ಹಂಚಿಕೊಳ್ಳಲಿ ಎಂದು ಕಾಯುತ್ತಿದ್ದೆ,

ಈ ಟೀಸರ್ ಬಂದಿರುವ ವೀಕ್ಷಣೆಗಳನ್ನು ನಾವು ನೋಡಿದರೇ ಜನರು ಎಷ್ಟರಮಟ್ಟಿಗೆ ಕೆಜಿಎಫ್ ಚಿತ್ರಕ್ಕಾಗಿ ತುದಿಗಾಲಲ್ಲಿ ಕಾದುಕುಳಿತಿದ್ದಾರೆ ಎಂಬುದು ತಿಳಿಯುತ್ತದೆ. ಕೇವಲ ಒಂದು ಟೀಸರ್ ನಿಂದ ಯಶ್ ಹಾಗೂ ನಿರ್ದೇಶಕ ಪ್ರಶಾಂತ್ ನೀಲ್ ತಂಡದ ಪರಿಶ್ರಮ ಕಾಣಿಸುತ್ತಿದೆ. ನಾನು ಒಂದು ಸಿನಿಮಾ ಕೆಲಸಕ್ಕಾಗಿ ಬೆಂಗಳೂರಿಗೆ ಹೋದಾಗ ಆಕಸ್ಮಿಕವಾಗಿ ಕೆಜಿಎಫ್ ಚಿತ್ರತಂಡದ ಜೊತೆ ಭೇಟಿ ಮಾಡಲು ಅವಕಾಶ ಸಿಕ್ಕಿತ್ತು. ಅಲ್ಲಿ ಕೆಲವು ಕ್ಷಣಗಳನ್ನು ನಾನು ಕಳೆದೆ ಅಂದೇ ನನಗೆ ತಿಳಿಯಿತು ಇವರು ಮಾಡುತ್ತಿರುವ ಕೆಲಸ ಏನು ಎಂಬುದು, ತಕ್ಷಣವೇ ನಾನು ನನಗೆ ತಿಳಿದಿರುವ ಬಾಲಿವುಡ್ ಹಾಗೂ ದಕ್ಷಿಣ ಭಾರತದ ಚಿತ್ರರಂಗದವರಿಗೆ ಕರೆಮಾಡಿ ಈ ಸಿನಿಮಾ ಬಿಡುಗಡೆ ಮಾಡುವ ಕೆಲಸ ಶುರು ಮಾಡಿ ಎಂದು ಹೇಳಿದೆ ನಾನು ಕೆಜಿಎಫ್ ತಂಡಕ್ಕೆ ಹಲವಾರು ಬಾರಿ ಸಪೋರ್ಟ್ ಮಾಡಿದ್ದೇನೆ. ಈ ಟೀಸರ್ ನೋಡಿದ ಮೇಲಂತೂ ಕೆಜಿಎಫ್ ಚಿತ್ರ ತಂಡಕ್ಕೆ ನನ್ನ ಬೆಂಬಲ ಸಂಪೂರ್ಣವಾಗಿ ಇರುತ್ತದೆ ಹಾಗೂ ಇನ್ನೂ ಹೆಚ್ಚಾಗಿರುತ್ತದೆ ಖಂಡಿತ ಈ ಚಿತ್ರ ಭರ್ಜರಿ ಯಶಸ್ಸು ಗಳಿಸಲಿದೆ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ

Get real time updates directly on you device, subscribe now.