ಗೊಂಬೆ ತಾಯಿ ಕಲ್ಪನಾ ಪಾತ್ರದಾರಿ ಲಕ್ಷಿ ರವರ ಗಂಡ ಯಾರು ಗೊತ್ತಾ ?? ಇವರು ಕೂಡ ಖ್ಯಾತ ಖಳನಟ ಯಾರು ಗೊತ್ತೇ??

4

Get real time updates directly on you device, subscribe now.

ನಮಸ್ಕಾರ ಸ್ನೇಹಿತರೇ, ಲಕ್ಷ್ಮಿ ಬಾರಮ್ಮ ಸೀರಿಯಲ್ ಮೂಲಕ ಖ್ಯಾತಿ ಪಡೆದು ಕೊಂಡಿರುವ ಲಕ್ಷ್ಮಿ ರವರ ಬಗ್ಗೆ ನಿಮಗೆಲ್ಲರಿಗೂ ತಿಳಿದೇ ಇರುತ್ತದೆ. 15 ವರ್ಷಗಳಿಂದ ಕನ್ನಡ ಕಿರುತೆರೆಯಲ್ಲಿ ವಿವಿಧ ರೀತಿಯ ಪಾತ್ರಗಳಿಗೆ ಜೀವ ತುಂಬಿರುವ ಲಕ್ಷ್ಮಿ ರವರು, ಕನ್ನಡದ ಹಲವಾರು ಖ್ಯಾತ ಧಾರಾವಾಹಿಗಳಲ್ಲಿ ನಟನೆ ಮಾಡಿದ್ದಾರೆ. ಸಿನಿಮಾ ರಂಗದಲ್ಲಿಯೂ ಕೂಡ 20ಕ್ಕೂ ಅಧಿಕ ಚಿತ್ರಗಳಲ್ಲಿ ನಟನೆ ಮಾಡಿರುವ ಲಕ್ಷ್ಮಿ ರವರು, ಹಲವಾರು ವರ್ಷಗಳಿಂದ ಪೋಷಕ ಪಾತ್ರಗಳಲ್ಲಿ ನಟನೆ ಮಾಡುತ್ತಿದ್ದಾರೆ. ಕೆಲವು ವರ್ಷಗಳ ಹಿಂದೆ ಲಕ್ಷ್ಮೀ ಬಾರಮ್ಮ ಎಂಬ ಧಾರವಾಹಿಯಲ್ಲಿ ನಾಯಕ ನಟಿಯ ತಾಯಿ ಪಾತ್ರವನ್ನು ಮಾಡುವ ಮೂಲಕ ಕರ್ನಾಟಕದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಭಿಮಾನಿಗಳನ್ನು ಗಳಿಸಿಕೊಂಡಿದ್ದಾರೆ.

ಲಕ್ಷ್ಮಿ ಸಿದ್ದಯ್ಯ ಎಂಬ ಹೆಸರು ಹೇಳಿದರೇ ಕೆಲವು ಜನರಿಗೆ ನೆನಪಾಗದೆ ಇರಬಹುದು ಆದರೆ ಲಕ್ಷ್ಮೀ ಬಾರಮ್ಮ ಧಾರವಾಹಿ ಕಲ್ಪನಾ ಅಥವಾ ಗೊಂಬೆ ತಾಯಿ ಎಂದ ಕೂಡಲೇ ಎಲ್ಲರಿಗೂ ಕ್ಷಣ ಮಾತ್ರದಲ್ಲಿ ನೆನಪಾಗುತ್ತಾರೆ. ಹೀಗೆ ಕಿರುತೆರೆಯಲ್ಲಿ ಕಳೆದ 15 ವರ್ಷಗಳಿಂದ ತಮ್ಮದೇ ಆದ ಕೊಡುಗೆ ನೀಡುತ್ತಿರುವ ಲಕ್ಷ್ಮಿ ಸಿದ್ದಯ್ಯ ರವರ ಬಗ್ಗೆ ನಾವು ಇಂದು ಕೆಲವು ಆಸಕ್ತಿಕರ ಮಾಹಿತಿಗಳನ್ನು ತಿಳಿಸಿ ಕೊಡುತ್ತೇವೆ. ನಿಮಗೆ ತಿಳಿದಿದೆಯೋ ಇಲ್ಲವೋ ಗೊತ್ತಿಲ್ಲ ಲಕ್ಷ್ಮಿ ಸಿದ್ದಯ್ಯ ರವರು ರಾಧಿಕಾ ಪಂಡಿತ್ ಹಾಗೂ ರಾಕಿಂಗ್ ಸ್ಟಾರ್ ಯಶ್ ರವರ ಜೊತೆ ಉತ್ತಮ ಸ್ನೇಹ ಸಂಬಂಧವನ್ನು ಕಾಪಾಡಿಕೊಂಡಿದ್ದಾರೆ. ರಾಧಿಕಾ ಪಂಡಿತ್ ರವರ ಮನೆಯ ಎಲ್ಲಾ ಖಾಸಗಿ ಕಾರ್ಯಕ್ರಮಗಳಲ್ಲಿ ಲಕ್ಷ್ಮಿ ರವರು ಕಾಣಿಸಿಕೊಳ್ಳುತ್ತಾರೆ.

ಲಕ್ಷ್ಮಿ ರವರ ಕುಟುಂಬದ ಕುರಿತು ಮಾತನಾಡುವುದಾದರೇ ಲಕ್ಷ್ಮಿ ರವರ ಪತಿ ಮತ್ಯಾರು ಅಲ್ಲ ಕನ್ನಡ ಚಿತ್ರರಂಗದಲ್ಲಿ ಹಲವಾರು ಸಿನಿಮಾಗಳಲ್ಲಿ ಖಳ ನಟರಾಗಿ ಕಾಣಿಸಿಕೊಂಡಿರುವ ಸಿದ್ದಯ್ಯ ರವರು. ಹೌದು ಕೆಜಿಎಫ್ ನಲ್ಲಿಯೂ ಕೂಡ ಸಿದ್ದಯ್ಯ ರವರು ನಟನೆ ಮಾಡಿದ್ದಾರೆ, ಕೆಜಿಎಫ್ ಸಿನಿಮಾ ದಲ್ಲಿ ಕಂಡು ಬರುವ ಪೊಲೀಸ್ ಸ್ಟೇಷನ್ ಸೀನ್ ನಲ್ಲಿ ಪೊಲೀಸ್ ಅಧಿಕಾರಿಯಾಗಿ ಕಾಣಿಸಿಕೊಳ್ಳುವ ಸಿದ್ಧಯ್ಯ ರವರು ಮತ್ಯಾರು ಅಲ್ಲ ಲಕ್ಷ್ಮಿ ರವರ ಪತಿ. ಇನ್ನು ಈ ದಂಪತಿಗಳಿಗೆ ಒಬ್ಬ ಮುದ್ದಾದ ಮಗನಿದ್ದು ಇನ್ನು ಈತನಿಗೆ 17 ವರ್ಷ, ಸದ್ಯದ ಮಟ್ಟಿಗೆ ಯಾವುದೇ ಧಾರವಾಹಿಗಳಲ್ಲಿ ಆಗಲಿ ಅಥವಾ ಸಿನಿಮಾಗಳಲ್ಲಿ ಈ ಬಾಲಕ ನಟನೆ ಮಾಡಿಲ್ಲ.

Get real time updates directly on you device, subscribe now.